ದೊಂದಿ….

ಕವಿತೆ ದೊಂದಿ…. ಕಗ್ಗಲ್ಲನ್ನೂ ಮೃದುವಾಗಿಕೊರೆದು ಬೇರೂರಿ ನಿಂತುತೀಡುವ ತಂಗಾಳಿಯ ಸೆಳೆತಕೆಬಾಗಿ ಬಳುಕುವಬಳ್ಳಿಯ ಕುಡಿಯಲ್ಲಿನಿನ್ನ ನಡಿಗೆಯ ಸೆಳಕು ಕಂಡುನನ್ನ ಕಣ್ಣುಗಳು ಮಿನುಗುತ್ತವೆ…. ಬೆಳದಿಂಗಳಿಗೆ ಬೇಡವಾದಕಾಡಿಗೆ ಕಪ್ಪಿನ ರಾತ್ರಿಯಲಿದೂರದಿ ಮಿನುಗುವಕೋಟಿ ನಕ್ಷತ್ರಗಳ ವದನದಲಿನಿನ್ನ ನಗೆಯ ಬೆಳಕು ಚೆಲ್ಲಿದಂತಾಗಿನನ್ನ ಮನಸ್ಸು ಮುದಗೊಳ್ಳುತ್ತದೆ…. ಬಿಸಿಲ ಬೇಗೆಯಲಿಬಸವಳಿದವನಿಗೆ ಬಯಲಿನಲಿ ನಿಂತಒಂಟಿ ಮರದ ತಣ್ಣನೆಯ ನೆರಳಿನಂತೆಬಾಳ ಬೇಗೆಯಲಿ ಬಸವಳಿದವನಿಗೆನಿನ್ನ ಮಡಿಲು ನೆನಪಾಗಿನನ್ನ ಹೃದಯ ಪುಳಕಗೊಳ್ಳುತ್ತದೆ… ಹೀಗೇ….. ನೀ ಧಿಕ್ಕರಿಸಿಚೆಲ್ಲಿ ಹೋದ ಸುಡುಸುಡುವನೆನಪಿನ ಕಿಡಿಗಳನುಹೆಕ್ಕಿ ದೊಂದಿ ಮಾಡಿಕೊಳ್ಳುತ್ತಿದ್ದೇನೆಬದುಕಿನ ಕತ್ತಲೆಗಿರಲೆಂದು…! ಮತ್ತೆ ಕನಸು ಕಾಣುತ್ತಿರುವೆನಾವು ಅಪರಿಚಿತರಾಗಿದ್ದತಿರುವಿನಿಂದ ಯಾನ ಶುರುವಾದರೆಸುಂದರವಾಗಬಹುದು … Continue reading ದೊಂದಿ….